ರಾಷ್ಟ್ರೀಯ
Trending

ದೇಶದಲ್ಲಿ ಒಂದೇ ದಿನ 10,956 ಮಂದಿಗೆ ಕೊರೊನಾ:ಸೋಂಕಿತರ ಸಂಖ್ಯೆ 2.97 ಲಕ್ಷಕ್ಕೆ ಏರಿಕೆ !

ನವದೆಹಲಿ: ಭಾರತದಲ್ಲಿ  ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತಿದ್ದು  ಒಂದೇ ದಿನ ಬರೋಬ್ಬರಿ 10,956 ಮಂದಿಗೆ  ಕೊರೊನಾ ವೈರಸ್  ಸೋಂಕು ದೃಢಪಟ್ಟಿದೆ.ಲಾಕ್ಡೌನ್ ಸಡಿಲವಾದ  ಬೆನ್ನಲ್ಲೇ ದೇಶದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ದೇಶದಲ್ಲಿ ಸೋಂಕಿತರ ಸಂಖ್ಯೆ 2,97,535ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಇಂದು ಮಾಹಿತಿ ನೀಡಿದೆ.

ಕಳೆದ 24 ಗಂಟೆಗಳಲ್ಲಿ ಕೊರೊನಾ ಸೋಂಕಿನಿಂದಾಗಿ ಭಾರತ ದೇಶದಲ್ಲಿ 396 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ಮಹಾಮಾರಿ ವೈರಸ್ಗೆ ಬಲಿಯಾದವರ ಸಂಖ್ಯೆ ಕೂಡ 8,498ಕ್ಕೆ ಏರಿಕೆಯಾಗಿದೆ.ಕಳೆದ 24 ಗಂಟೆಗಳಲ್ಲಿ 396 ಮಂದಿ ಕೊರೊನಗೆ  ಬಲಿಯಾಗಿದ್ದಾರೆ .2,97,535 ಕೊರೊನಾ ಸೋಂಕಿತರ ಪೈಕಿ 1,47,195 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಪ್ರಸ್ತುತ ದೇಶದಲ್ಲಿ 1,41,842 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker