ರಾಷ್ಟ್ರೀಯ

ತೆಲುಗಿನ ಜನಪ್ರಿಯ ಕಿರುತೆರೆ ನಟಿ ಆತ್ಮಹತ್ಯೆಗೆ ಶರಣು

ಹೈದರಾಬಾದ್ : ತೆಲುಗು ಜನಪ್ರಿಯ ಕಿರುತೆರೆ ನಟಿ ಶ್ರಾವಣಿ ಹೈದರಾಬಾದ್ ಎಸ್.ಆರ್. ನಗರದ ಮಧುರಾ ನಗರದಲ್ಲಿ ತಮ್ಮ ನಿವಾಸದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆಂಧ್ರ ಪ್ರದೇಶದ ಕಾಕಿನಾಡ ಮೂಲದ ಶ್ರಾವಣಿ ಹೈದರಾಬಾದ್ನದಲ್ಲಿ ವಾಸಿಸುತ್ತಿದ್ದರು. ‘ಮನಸು ಮಮತ’ ಹಾಗೂ ‘ಮೌನರಾಗಂ’ ಧಾರಾವಾಹಿ ಮೂಲಕ ಮನೆಮಾತಾಗಿದ್ದ ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೆಲವು ದಿನಗಳ ಹಿಂದೆ ಟಿಕ್​ಟಾಕ್​ನಲ್ಲಿ ಪರಿಚಯವಾದ ದೇವರಾಜು ರೆಡ್ಡಿ ಪ್ರೀತಿಯ ನಾಟಕವಾಡಿ, ಖಾಸಗಿ ಪೋಟೋ ತೆಗೆದು ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ನೀಡಿ ಹಣಕ್ಕಾಗಿ ಪೀಡಿಸುತ್ತಿದ್ದನು ಎಂದು ಶ್ರಾವಣಿ ಎಸ್.ಆರ್. ನಗರದಲ್ಲಿ ದೂರು ನೀಡಿದ್ದಳು ಎಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ.

ದೇವರಾಜು ರೆಡ್ಡಿಯ ಕಿರುಕುಳ ಹೆಚ್ಚಾದ ಬಳಿಕ ಶ್ರಾವಣಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೋಷಕರು ದೂರು ನೀಡಿದ್ದಾರೆ. ಸದ್ಯ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker