ವಿಶೇಷ ಲೇಖನಗಳು

ಶ್ರೀಕೃಷ್ಣ ಮತ್ತು ಗೋವರ್ಧನ ಪರ್ವತ

ಭಗವಾನ ಶ್ರೀಕೃಷ್ಣ ಗೋಕುಲದಲ್ಲಿ ವಾಸಿಸುತ್ತಿದ್ದರು.ಅಲ್ಲಿ ಗೋವರ್ಧನ ಎಂಬ ದೊಡ್ಡ ಪರ್ವತವಿತ್ತು.ಒಮ್ಮೆ ನಂದಗೋಕುಲದ ಗೊಲ್ಲರು ಇಂದ್ರನಿಗಾಗಿ ಒಂದು ಯಾಗವನ್ನು ಏರ್ಪಡಿಸಬೇಕೆಂದು ಸಂಕಲ್ಪಿಸಿದ್ದರು. ಯಾಗದ ಬದಲು ಗೋವರ್ಧನ ಗಿರಿಯನ್ನೇ ಪೂಜಿಸಬೇಕೆಂದು ಶ್ರೀಕೃಷ್ಣ ಗೊಲ್ಲರಿಗೆ ಸೂಚಿಸಿದ. ಅವರು ಕೃಷ್ಣನ ಸೂಚನೆಯಂತೆ ಗಿರಿಯನ್ನು ಪೂಜಿಸಲು ಅಣಿಯಾದರು. ಆಗ ಇಂದ್ರ ಕ್ರುದ್ಧನಾಗಿ ಗೋಕುಲ ಮುಳುಗಿಹೋಗುವಂತೆ ಮಳೆ ಸುರಿಸಲಾರಂಭಿಸಿದ. ಆಗ ಕೃಷ್ಣ ತನ್ನ ಕಿರಿಬೆರಳಿನಿಂದ ಆ ಪರ್ವತವನ್ನು ಎತ್ತಿ ಕೊಡೆಯಂತೆ ಹಿಡಿದು ಅದರ ಕೆಳಗೆ ಗೊಲ್ಲರು ಮತ್ತು ಅವರ ದನಕರುಗಳು ರಕ್ಷಣೆ ಪಡೆವಂತೆ ಮಾಡಿದ. ಇದು ಕೃಷ್ಣ ಎಸಗಿದ ಪವಾಡಗಳಲ್ಲಿ ಒಂದು. ಇದರಿಂದಾಗಿ ಕೃಷ್ಣನನ್ನು ಗೋವರ್ಧನ ಗಿರಿಧಾರಿ, ಗಿರಿಧರ ಮುಂತಾಗಿ ಭಕ್ತರು ಸ್ತುತಿಸಿದ್ದಾರೆ. ಈ ವಿಚಾರವಾಗಿ ಹರಿವಂಶ, ವಿಷ್ಣು ಪುರಾಣ, ಭಾಗವತ ಮತ್ತು ಭಾರತಗಳಲ್ಲಿ ಪ್ರಸ್ತಾಪಿಸಲಾಗಿದೆ.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker