ರಾಷ್ಟ್ರೀಯ

ಮೀನು ಹಿಡಿದು ರಾತ್ರೋರಾತ್ರಿ ಲಕ್ಷಾಧೀಶೆಯಾದ ಮಹಿಳೆ

ಬರೋಬ್ಬರಿ 52 ಕೆಜಿ ಮೀನೊಂದನ್ನು ಹಿಡಿದ ಮಹಿಳೆಯೊಬ್ಬರು ರಾತ್ರೋರಾತ್ರಿ ಸಿರಿವಂತರಾದ ಘಟನೆ ಪಶ್ಚಿಮ ಬಂಗಾಳದಲ್ಲಿ ಘಟಿಸಿದೆ. ಇಲ್ಲಿನ ಸಾಗರ ಬಳಿ ಇರುವ ಚಕ್ಫುಲ್‌ಬುದಿ ಎಂಬ ಗ್ರಾಮದಲ್ಲಿ ಬೋಲಾ ಹೆಸರಿನ ಈ ಭಾರೀ ಮೀನನ್ನು ಹಿಡಿದಿದ್ದಾರೆ ಪುಷ್ಪಾ ಕಾರ್‌.

ಅವರ ಈ ಭಾರೀ ಬೇಟೆಗೆ ಮೂರು ಲಕ್ಷ ರೂ.ಗಳ ಸಂಪಾದನೆ ಆಗಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಈ ಮೀನು ಪ್ರತಿ ಕೆಜಿಗೆ 6,200 ರೂ.ಗಳಂತೆ ಮಾರಾಟವಾಗಿದೆ. ಮೂರು ಲಕ್ಷ ರೂ.ಗಳು ಸಿಕ್ಕಿವೆ ಎಂದು ಪುಷ್ಪಾ ಖಾತ್ರಿಪಡಿಸಿದ್ದಾರೆ.

ಮೀನನ್ನು ನದಿಯಿಂದ ಊರಿಗೆ ತರಲು ಬಹಳ ಪ್ರಯಾಸ ಪಟ್ಟ ಪುಷ್ಪಾಗೆ ಗ್ರಾಮಸ್ಥರು ನೆರವಾಗಿದ್ದು, ಅದನ್ನು ಮಾರುಕಟ್ಟೆಗೆ ಕೊಂಡೊಯ್ಯಲೂ ಸಹ ಜೊತೆಯಾಗಿದ್ದಾರೆ.

ಬೆಂಗಾಲಿಯಲ್ಲಿ ’ಭೋಲಾ’ ಎಂದು ಕರೆಯಲಾಗುವ ಈ ಮೀನಿಗೆ ಭಾರೀ ಬೆಲೆಯಿದ್ದು, ಅದರ ಕೊಬ್ಬನ್ನು ಆಗ್ನೇಯ ಏಷ್ಯಾದ ದೇಶಗಳಲ್ಲಿ ದೊಡ್ಡ ಮೊತ್ತಕ್ಕೆ ಮಾರಾಟ ಮಾಡಲಾಗುತ್ತದೆ.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker