ಕರಾವಳಿ

ಆನ್ ಲೈನ್ ಕ್ಲಾಸ್ ನೆಪದಲ್ಲಿ ಗೇಮ್ ಆಡಿದ : ಮೊಬೈಲ್ ಕಸಿದುಕೊಂಡಿದ್ದಕ್ಕೆ ಪ್ರಾಣ ಬಿಟ್ಟ

ಗದಗ : ಆನ್ ಲೈನ್ ಕ್ಲಾಸ್ ನೆಪದಲ್ಲಿ ಗೇಮ್ ಆಡುತ್ತಿದ್ದ ಯುವಕನೊಬ್ಬ ಮೊಬೈಲ್ ಕಸಿದುಕೊಂಡಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಯುವಕನಿಗೆ, ಗೇಮ್ ಆಡಬೇಡ ಎಂದು ಬೈದು ಮೊಬೈಲ್ ಕಸೆದುಕೊಂಡಿದಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ  ಘಟನೆ ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ಹಿರೇಬಜಾರ್ ನಿವಾಸಿ 17 ವರ್ಷದ ಕಾರ್ತಿಕ್ ಬಬಲಿ ಎಂಬ ಯುವಕ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ಗೇಮ್ ಗೆ ಯುವಕ ಮಾರುಹೋಗಿದ್ದ.  ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ಆನ್ ಲೈನ್ ಕ್ಲಾಸ್ ನೆಪದಲ್ಲಿ ಯಾವಾಗಲೂ ಬರೀ ಗೇಮ್ ಆಡುತ್ತಿದ್ದ. ಇದನ್ನು ಗಮನಿಸಿದ ಪಾಲಕರು ಬರೀ ಗೇಮ್ ಆಡ್ತಿಯಾ, ಓದು ಅಂತ ಬೈದು ಮೊಬೈಲ್ ಕಸಿದುಕೊಂಡಿದ್ದಾರೆ.

ಸಾಕಷ್ಟು ಕೇಳಿದ್ರು ಕೊಡದ ಹಿನ್ನಲೆ‌ ಮನನೊಂದು ನೇಣಿಗೆ ಶರಣಾಗಿದ್ದಾನೆ. ಗಜೇಂದ್ರಗಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker