ರಾಜ್ಯ

ಕೊರೊನಾ ಲಸಿಕೆ ಸಿದ್ಧವಾಗಿಲ್ಲ: ಸಚಿವ ಸುಧಾಕರ್

ಬೆಳಗಾವಿ, ನ.21- ಕೊರೊನಾ ಲಸಿಕೆ ಇನ್ನೂ ಬಿಡುಗಡೆ ಆಗಿಲ್ಲ. ಅಕೃತ ಆದ ನಂತರ ನಿಮಗೂ ಗೊತ್ತಾಗುತ್ತದೆ ಎಂದು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಅವರು, ಕೇಂದ್ರ ಸರ್ಕಾರ, ಪ್ರಧಾನಿಯವರು ಕ್ಲಿನಿಕಲ್ ಟ್ರಯಲ್ ನಡೆಸಿರುವ ಕಂಪೆನಿಗಳ ಜತೆ ಸಮಾಲೋಚನೆ ನಡೆಸಿದ್ದಾರೆ.

ಅಡ್ವಾನ್ಸ್ ಆಗಿ ಮೂರನೆ ಹಂತ ತಲುಪಿದ ಕಂಪೆನಿ ಜತೆ ಕೇಂದ್ರ ಸಮಾಲೋಚನೆ ನಡೆದಿದ್ದು, ಅದೇ ರೀತಿ ಕಂಪೆನಿಗಳ ಜತೆ ಕೇಂದ್ರ ಸರ್ಕಾರ ಒಡಂಬಡಿಕೆ ಮಾಡಿಕೊಂಡಿದೆ. ಯಾವ ಕಂಪೆನಿಗೆ ಅಕೃತ ಎಂದು ಘೋಷಣೆ ಮಾಡುತ್ತಾರೆ ಆ ಲಸಿಕೆ ಸಿಗುವ ಕೆಲಸ ಆಗುತ್ತದೆ ಎಂದರು.

ಭಾರತ ದೇಶದಲ್ಲಿ ದೊಡ್ಡ ಮಟ್ಟಿಗೆ ಲಸಿಕೆ ಸಿಗುವ ಕೆಲಸ ಆಗುತ್ತದೆ. ಆರೋಗ್ಯ ಇಲಾಖೆಯಲ್ಲಿ ಜನಪರ ಬದಲಾವಣೆಗಳು ನಡೆಯುತ್ತಿವೆ.

ಅಂತಾರಾಷ್ಟ್ರೀಯ ಗುಣಮಟ್ಟದ 108 ಆಂಬುಲೆನ್ಸ್ ಸರ್ವೀಸ್‍ಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕಾಲೇಜಿನ ವಿದ್ಯಾರ್ಥಿಗಳು ಹಾಗೂ ನಾವು ಯಾರೂ ಸಹ ಹೊರೆತಾಗಿಲ್ಲ. ಎಷ್ಟು ಕಾಲೇಜು ವಿದ್ಯಾರ್ಥಿಗಳಿಗೆ ಕೊರೊನಾ ಬಂದಿದೆ ನಿಖರ ಮಾಹಿತಿ ಇಲ್ಲ. ಉನ್ನತ ಶಿಕ್ಷಣ ಸಚಿವರ ಜತೆ ಮಾತನಾಡಿ ಮಾಹಿತಿ ಪಡೆಯುತ್ತೇನೆ. ಲಸಿಕೆ ಬಂದ್ರೆ ಅದರ ಸಂಗ್ರಹಕ್ಕೆ ಎಲ್ಲ ವ್ಯವಸ್ಥೆ ಆಗಿದೆ ಎಂದು ಆರೋಗ್ಯ ಸಚಿವರು ತಿಳಿಸಿದರು.

ಕೇಂದ್ರ ಆರೋಗ್ಯ ಸಚಿವರ ಜತೆ ವಿಡಿಯೋ ಸಂವಾದವೂ ಆಗಿದೆ. ಕೊರೊನಾ ಲಸಿಕೆ ಬಂದ ಮೇಲೆ ವಿತರಣೆ ನಿಧಾನ ಆಗಬಾರದೆಂದು ಸಕಲ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಎಲ್ಲಾ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಲಸಿಕೆ ವಿತರಿಸುವ ವ್ಯವಸ್ಥೆ ಆಗಿದೆ ಎಂದು ಸುಧಾಕರ್ ಹೇಳಿದರು.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker