ರಾಜ್ಯ

ರಾಜ್ಯದಲ್ಲಿ ಇಂದು 30,309 ಜನರಿಗೆ ಕೋವಿಡ್.

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 30,309 ಕೋವಿಡ್ ಸೋಂಕು ಪ್ರಕರಣಗಳು ದಾಖಲಾಗಿದ್ದು, 525 ಜನರು ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇನ್ನು ಇಂದು 58,395 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ಇದುವರೆಗಿನ ಒಟ್ಟು ಸಾವಿನ ಸಂಖ್ಯೆ 22,838 ಕ್ಕೆ ಏರಿಕೆಯಾಗಿರುವುದಾಗಿ ಆರೋಗ್ಯ ಇಲಾಖೆ ಹೇಳಿದೆ.

ಬೆಂಗಳೂರಿನಲ್ಲಿ ಇಂದು 8,676 ಕೋವಿಡ್ ಸೋಂಕು ಪ್ರಕರಣಗಳು ವರದಿಯಾಗಿದ್ದು, 298 ಜನರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಬೆಂಗಳೂರಿನಲ್ಲಿ ಇದುವರೆಗೆ ಕೋವಿಡ್ ಕಾರಣದಿಂದಾಗಿ 10,020 ಜನರು ಸಾವನ್ನಪ್ಪಿದಂತಾಗಿದೆ.

ಉಳಿದ ಜಿಲ್ಲೆಗಳ ಕೋವಿಡ್ ಸೋಂಕು ವಿವರ :

ಬೆಂಗಳೂರು ಗ್ರಾಮಾಂತರ 1,339(19 ಸಾವು), ಬಾಗಲಕೋಟೆ 295(1), ಬಳ್ಳಾರಿ 1,799(28), ಬೆಳಗಾವಿ 2,118(5), ಚಿಕ್ಕಬಳ್ಳಾಪುರ 339(5), ಕೋಲಾರ 1,021(2), ಬೀದರ್ 113(4), ಚಾಮರಾಜನಗರ 345(8), ಚಿಕ್ಕಮಗಳೂರು 401(2), ಚಿತ್ರದುರ್ಗ 436(1), ದಕ್ಷಿಣ ಕನ್ನಡ 777(7), ದಾವಣಗೆರೆ 594(4), ಧಾರವಾಡ 969 (3), ಗದಗ 543(5), ಹಾಸನ 834 (18), ಹಾವೇರಿ 187(6), ಕಲಬುರಗಿ 548(7), ಕೊಡಗು 161(3), ಕೊಪ್ಪಳ 523(10), ಮಂಡ್ಯ 606(4), ಮೈಸೂರು 1916(13), ರಾಯಚೂರು 493(3), ರಾಮನಗರ 427(3), ಶಿವಮೊಗ್ಗ 1168(15), ತುಮಕೂರು 1562(15), ಉಡುಪಿ 737(3), ಉತ್ತರ ಕನ್ನಡ 803(22), ವಿಜಯಪುರ 262(8), ಯಾದಗಿರಿ 317(3) ಪ್ರಕರಣಗಳು ದಾಖಲಾಗಿವೆ.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker