ಕರಾವಳಿ

ಯುವ ಕಾಂಗ್ರೇಸ್ ವತಿಯಿಂದ ಬಿಳಿ ಬೆಂಡೆ ಗಿಡ‌ ನೇಡುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ

ಕಾರ್ಕಳ : ಪಾಲಡ್ಕ ಟಿ.ಎ‌.ಪಿ‌.ಎಂ.ಸಿ. ಮುಂಭಾಗ ಮುಖ್ಯ ರಸ್ತೆ ಮಧ್ಯದಲ್ಲಿನ ಹೊಂಡದಲ್ಲಿ ಬಿಳಿ ಬೆಂಡೆ ಗಿಡ ನೆಡುವ ಮೂಲಕ‌ ಯುವ ಕಾಂಗ್ರೆಸ್ ಮಂಗಳವಾರ ವಿನೂತನವಾಗಿ ಪ್ರತಿಭಟನೆ ನಡೆಸಿದೆ. ಚಿನ್ನದ ರಸ್ತೆಯ ಆಸೆ ತೋರಿಸಿದವರು ಗುಂಡಿ ಭಾಗ್ಯವನ್ನು ಕರುಣಿಸುತ್ತಿದ್ದಾರೆ. ಅಸಮರ್ಪಕ ಲಾಕ್ಡೌನ್ ನಿಂದ ಸಂಕಷ್ಟಕ್ಕೆ ಒಳಗಾದವರಿಗೆ ಆಹಾರ ಕಿಟ್ ನೀಡುವ ಬದಲಿಗೆ ಬೆಂಡೆ ಬೀಜ‌ ನೀಡಿ ಮೂರ್ಖರನ್ನಾಗಿಸುವ ಪ್ರಯತ್ನ ನಡೆಯುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಪುರಸಭಾ ಸದಸ್ಯ ಶುಭದರಾವ್, ಯುವ ಕಾಂಗ್ರೇಸ್ ಅಧ್ಯಕ್ಷ ಯೋಗಿಶ್ ಇನ್ನಾ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ‌ ಕೃಷ್ಣ ಎ. ಶೆಟ್ಟಿ ಬಜಗೋಳಿ, ಪ್ರದೀಪ್ ‌ಶೆಟ್ಟಿ‌ ನಲ್ಲೂರು, ರಾಜೇಂದ್ರ, ಶಾಮ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker