ಅಂತಾರಾಷ್ಟ್ರೀಯ

ಗಾಜಾದ ಮೇಲೆ ಇಸ್ರೇಲ್ ಮತ್ತೆ ಏರ್ ಸ್ಟ್ರೈಕ್ : ಕದನ ವಿರಾಮದ ಬಳಿಕ ಮೊದಲ ವಾಯು ದಾಳಿ

ಜೆರುಸಲೇಂ: ಕದನ ವಿರಾಮದಿಂದ ಕೆಲವು ದಿನಗಳ ಕಾಲ ಶಾಂತವಾಗಿದ್ದ ಇಸ್ರೇಲ್- ಪ್ಯಾಲೆಸ್ತೀನ್ ನಡುವೆ ಮತ್ತೆ ಸಂಘರ್ಷ ಏರ್ಪಟ್ಟಿದೆ. ಇಸ್ರೇಲ್ ನ ವಾಯುಪಡೆ ದಕ್ಷಿಣ ಗಾಜಾ ನಗರವಾದ ಖಾನ್ ಯೂನೆಸ್ ನ ಮೇಲೆ ದಾಳಿ ನಡೆಸಿದೆ.

ಇದು ಕದನ ವಿರಾಮ ಒಪ್ಪಂದ ಬಳಿಕ ನಡೆದ ಮೊದಲ ದೊಡ್ಡ ದಾಳಿಯಾಗಿದೆ. ಸಾವು- ನೋವಿನ ಬಗ್ಗೆ ಇನ್ನೂ ಯಾವುದೇ ವರದಿಯಾಗಿಲ್ಲ.

ಮೇ ತಿಂಗಳಲ್ಲಿ ಇಸ್ರೇಲ್ ಮತ್ತು ಪ್ಯಾಲೆಸ್ತೀನಿಯರ ನಡುವೆ 11 ದಿನಗಳ ಕಾಳಗ ನಡೆದಿತ್ತು. ಇದರಲ್ಲಿ 260 ಮಂದಿ ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದರೆ, 13 ಮಂದಿ ಇಸ್ರೇಲ್ ಜನರು ಸಾವನ್ನಪ್ಪಿದ್ದರು. ಮೇ 21ರಂದು ಕದನ ವಿರಾಮ ನಡೆದಿತ್ತು.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker