ರಾಜ್ಯ

ಜುಲೈ 5 ರಿಂದ ಅನ್ ಲಾಕ್ 3.0 ಜಾರಿ : ನಾಳೆ ಸಿಎಂ ಬಿಎಸ್ ವೈ ಮಹತ್ವದ ಸಭೆ !!!

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಅಬ್ಬರ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಹಂತ ಹಂತವಾಗಿ ಅನ್ ಲಾಕ್ ಪ್ರಕ್ರಿಯೆ ಆರಂಭಿಸಿದ್ದು, ಜುಲೈ 5 ರಿಂದ ಅನ್ ಲಾಕ್ 3.0 ಜಾರಿಯಾಗುವ ಸಾಧ್ಯತೆ ಇದೆ.

ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಾಳೆ ಮಹತ್ವದ ಸಭೆ ನಡೆಯಲಿದ್ದು, ಅನ್ ಲಾಕ್ 3.0 ಜಾರಿ ಕುರಿತಂತೆ ಘೋಷಣೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಕೊರೊನಾ ಪಾಸಿಟಿವ್ ರೇಟ್ ಕಡಿಮೆ ಇರುವ ಜಿಲ್ಲೆಗಳಲ್ಲಿ ಅನ್ ಲಾಕ್ 3.0 ಜಾರಿಗೆ ತರಲು ತಜ್ಞರು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ ಎನ್ನಲಾಗಿದ್ದು, ಜುಲೈ 5 ರಿಂದ ಚಿತ್ರಮಂದಿರ, ಮಾಲ್, ಕ್ಲಬ್, ಬಾರ್, ಸ್ವಿಮ್ಮಿಂಗ್ ಪೂಲ್ ಗೆ ಅವಕಾಶ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಜುಲೈ 5 ರಿಂದ ಬೆಳಗ್ಗೆಯಿಂದ ಸಂಜೆವರೆಗೂ ಚಿತ್ರಮಂದಿರ, ಮಾಲ್, ಕ್ಲಬ್, ಬಾರ್, ಸ್ವಿಮ್ಮಿಂಗ್ ಪೂಲ್ ತೆರೆಯಲು ಅನುಮತಿ ನೀಡುವ ಸಾಧ್ಯತೆ ಇದ್ದು, ಶೇ. 50 ರಷ್ಟು ಗ್ರಾಹಕರಿಗೆ ಅವಕಾಶ ನೀಡಬಹುದು. ಬಾರ್ ಗಳಲ್ಲಿ ಟೇಬಲ್ ಸರ್ವಿಸ್ ಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಜುಲೈ 5 ರ ನಂತರ ನೈಟ್ ಕರ್ಪ್ಯೂ ಮುಂದುವರೆಯಬಹುದು. ನೈಟ್ ಕರ್ಪ್ಯೂ ಸಂಜೆ 6 ಗಂಟೆಯಿಂದ ಜಾರಿಯಲ್ಲಿದ್ದು, ಜುಲೈ 5 ರಿಂದ ಸಂಜೆ 7 ಗಂಟೆಯಿಂದ ನೈಟ್ ಕರ್ಪ್ಯೂ ಜಾರಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker