ಕರಾವಳಿ

ಕಾತ್ಯಾಯಿನಿ ಕುಂಜಿಬೆಟ್ಟು ಅವರಿಗೆ ‘ನಾಗಶ್ರೀ ಕಾವ್ಯ ಪ್ರಶಸ್ತಿ’

ತುಮಕೂರಿನ ನಾಗಶ್ರೀ ಪ್ರತಿಷ್ಠಾನ ನೀಡುವ 2021 ನೇ ಸಾಲಿನ ನಾಗಶ್ರೀ ಕಾವ್ಯ ಪ್ರಶಸ್ತಿ ಯು ಉಡುಪಿಯ ಸಾಹಿತಿ ಡಾ|ಕಾತ್ಯಾಯಿನಿ ಕುಂಜಿಬೆಟ್ಟು ಅವರ ‘ಅವನು ಹೆಣ್ಣಾಗಬೇಕು’ ಎಂಬ ಕವನ ಸಂಕಲನಕ್ಕೆ ದೊರಕಿದೆ.
ಪ್ರಶಸ್ತಿಯು ರೂಪಾಯಿ ಐದು ಸಾವಿರ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಕಾತ್ಯಾಯಿನಿ ಕುಂಜಿಬೆಟ್ಟು ಅವರು ಪ್ರಸ್ತುತ ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭವು ಮುಂದೆ, ತುಮಕೂರು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗ ದೊಂದಿಗೆ ನಡೆಯಲಿದೆಯೆಂದು ಪ್ರಶಸ್ತಿ ಸಮಿತಿಯ ಸಂಚಾಲಕರಾದ ತೇಜಾವತಿ ಹೆಚ್. ಡಿ ಅವರು ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker