ರಾಜ್ಯ

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಬಾಲಿವುಡ್‌ ನಟಿ ಸುರೇಖಾ ಸಿಕ್ರಿ ನಿಧನ

ಮುಂಬೈ: ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಬಾಲಿವುಡ್‌ ನಟಿ ಸುರೇಖಾ ಸಿಕ್ರಿ (75) ಅವರು ಶುಕ್ರವಾರ ಹೃದಯಾಘಾತದಿಂದ ನಿಧನರಾದರು.

ಕೆಲ ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಸುರೇಖಾ ಮಿದುಳಿನ ಕಾಯಿಲೆಯಿಂದ ಬಳಲುತ್ತಿದ್ದರು. ಸುರೇಖಾ ಸಿಕ್ರಿ ಶುಕ್ರವಾರ ಬೆಳಿಗ್ಗೆ ನಿಧನರಾದರು ಎಂದು ಅವರ ಮ್ಯಾನೇಜರ್‌ ಓಂ ಸಾಯಿ ರಾಮ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

1978ರಲ್ಲಿ ಬಿಡುಗಡೆಯಾದ ಕಿಸ್ಸಾ ಕುರ್ಸಿ ಕಾ ಚಿತ್ರದ ಮೂಲಕ ಸುರೇಖಾ ಹಿಂದಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ತಮಸ್ (1988), ಮಮ್ಮೊ (1995) ಮತ್ತು ಬಧಾಯಿ ಹೊ (2018) ಚಿತ್ರಗಳಲ್ಲಿನ ಪಾತ್ರಗಳಿಗಾಗಿ ಅವರು ಮೂರು ಬಾರಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker