ರಾಜ್ಯ

ಮಂಜೇಶ್ವರ ಕಣ್ವತೀರ್ಥದಲ್ಲಿ , ಪಾಣೆಮಂಗಳೂರು ಸೇತುವೆಯ ಮೇಲೆ ಬೈಕ್ ಬಿಟ್ಟು ನಾಪತ್ತೆಯಾದ ಯುವಕನ ಶವ ಪತ್ತೆ.!

ಕಾಸರಗೋಡು: ಬೆಂಗಳೂರು ಮೂಲದ ವ್ಯಕ್ತಿಯೋರ್ವ ಬಂಟ್ವಾಳ ಸಮೀಪದ ಪಾಣೆಮಂಗಳೂರು ಸೇತುವೆಯಲ್ಲಿ ಜುಲೈ ೨೮ ರಂದು ಮುಂಜಾನೆ ಬೈಕನ್ನು ಚಲನಾ ಸ್ಥಿತಿಯಲ್ಲಿ ನಿಲ್ಲಿಸಿ ನಾಪತ್ತೆಯಾಗಿದ್ದು, ಇದೀಗ ಆತನ ಮೃತದೇಹ ಮಂಜೇಶ್ವರದ ಕಣ್ವತೀರ್ಥ ಸಮುದ್ರ ಕಿನಾರೆಯಲ್ಲಿ ಪತ್ತೆಯಾಗಿದೆ. ಮೃತರನ್ನು ಬೆಂಗಳೂರು ದಾಸರಹಳ್ಳಿ ನಿವಾಸಿ ಸತ್ಯವೇಲು (೨೯)ಎಂದು ಗುರುತಿಸಲಾಗಿದೆ.

ಕಾಸರಗೋಡು ಕರಾವಳಿ ಪೋಲೀಸರು ಸ್ಥಳಕ್ಕೆ ತಲುಪಿ ಮೃತದೇಹವನ್ನು ಕಾಸರಗೋಡು ಜನರಲ್‌ ಆಸ್ಪತ್ರೆಗೆ ಸಾಗಿಸಿದ್ದರು. ಕಾಸರಗೋಡು ಪೋಲೀಸರು ಬೆಂಗಳೂರಿನಲ್ಲಿರುವ ಆತನ ಮನೆಯವರಿಗೆ ವಿಷಯ ತಿಳಿಸಿದ್ದು. ಇಂದು ಆತನ ಮನೆಯವರು ಕಾಸರಗೋಡಿಗೆ ತಲುಪಿದ್ದು ಆತನ ಗುರುತು ಪತ್ತೆಹಚ್ಚಿದ್ದಾರೆ.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker