ರಾಜ್ಯ

ಯುವ ಕಾಫಿ ಉದ್ಯಮಿ ಶಕೀರ್ ಅಹ್ಮದ್ ನೇಣಿಗೆ ಶರಣು..!

ಕಾಫಿ ಉದ್ಯಮದಲ್ಲಿ 1 ಕೋಟಿ ರೂಪಾಯಿ ನಷ್ಟ ಸಂಭವಿಸಿ ಮನನೊಂದು ಯುವ ಉದ್ಯಮಿ ನಿನ್ನೆ  ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ನಿವಾಸಿ ಶಕೀರ್ ಅಹ್ಮದ್ ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ. ನೆಲಮಂಗಲ ನಗರದ ಕುಣಿಗಲ್ ವೃತ್ತದ ವಜ್ರೇಶ್ವರಿ ಲಾಡ್ಜ್​​​ ನಲ್ಲಿ ಅವರು ನೇಣಿಗೆ ಶರಣಾಗಿದ್ದಾರೆ.

ಜುಲೈ ೧೩ ರಂದು ಶಕೀರ್ ಕಾಣೆಯಾಗಿರುವುದಾಗಿ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಜುಲೈ ೨೯ ರಿಂದ ವಜ್ರೇಶ್ವರಿ ಲಾಡ್ಜ್ ​​ನಲ್ಲಿ ರೂಂ ಪಡೆದು ಶಕೀರ್ ತಂಗಿದ್ದರು. ಪ್ರತಿದಿನ ಊಟ ಕೊಡಲು ರೂಂಗೆ ಹೋಗುತ್ತಿದ್ದ ಲಾಡ್ಜ್​ ಸಿಬ್ಬಂದಿ, ನಿನ್ನೆ (ಸೋಮವಾರ) ಮಧ್ಯಾಹ್ನ ಹೋದಾಗ ಶಕೀರ್ ಬಾಗಿಲು ತೆಗೆಯಲಿಲ್ಲ. ಅನುಮಾನಗೊಂಡು ಪರಿಶೀಲನೆ ನಡೆಸಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.

ನೆಲಮಂಗಲ ಟೌನ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker