ಕರಾವಳಿ

ಕರಾಟೆ ಬ್ಲ್ಯಾಕ್ ಬೆಲ್ಟ್ ನಲ್ಲಿ ಆರನೇ ಪದವಿ ಪಡೆದ ಶಿಹಾನ್ ವಾಮನ್ ಪಾಲನ್ ಅಂಬಲಪಾಡಿ

ಉಡುಪಿ : ಬುಡೋಕಾನ್ ಕರಾಟೆ ಎಂಡ್ ಸ್ಪೋರ್ಟ್ಸ್ ಅಸೋಸಿಯೇಶನ್ ನ ಅಧ್ಯಕ್ಷ ಹಾಗೂ ಕರಾಟೆ ಮುಖ್ಯ ಶಿಕ್ಷಕರು, ಮುಖ್ಯ ಪರೀಕ್ಷಕ ಶಿಹಾನ್ ವಾಮನ್ ಪಾಲನ್ ಅಂಬಲಪಾಡಿ ಕರಾಟೆ ಕ್ರೀಡೆಯ ಪ್ರಮುಖ ಘಟ್ಟವಾಗಿರುವ ಬ್ಲ್ಯಾಕ್ ಬೆಲ್ಟ್ ಆರನೇ ಪದವಿಯನ್ನು ಪಡೆಯುವುದರೊಂದಿಗೆ ಶಿಹಾನ್ ಶ್ರೇಣಿಯಿಂದ ರೆಂಷಿ ಶ್ರೇಣಿಗೆ ಪದೋನ್ನತಿ ಹೊಂದಿದ್ದಾರೆ.

ಕರಾಟೆ ಬ್ಲ್ಯಾಕ್ ಬೆಲ್ಟ್ ಆರನೇ ಪದವಿ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರೈಸಿದ್ದ ಇವರು ಕರಾಟೆ ಬುಡೋಕಾನ್ ಇಂಟರ್ನ್ಯಾಷನಲ್ ಆಸ್ಟ್ರೇಲಿಯಾದ ಏಷ್ಯಾ ಮುಖ್ಯ ಶಿಕ್ಷಕ ಹಂಷಿ ಬಿ. ಪರಮೇಶ್ ರಿಂದ ಬ್ಲ್ಯಾಕ್ ಬೆಲ್ಟ್ ಪಟ್ಟಿ ಆರನೇ ಪದವಿಯ ಬೆಲ್ಟ್ ಹಾಗೂ ಪ್ರಮಾಣ ಪತ್ರವನ್ನು ಹೈದರಾಬಾದ್ ಕೆಬಿಐ ಏಷ್ಯಾ ಮುಖ್ಯ ಕಛೇರಿಯಲ್ಲಿ ಪಡೆದಿದ್ದಾರೆ.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker