ಕರಾವಳಿತಾಜಾ ಸುದ್ದಿಗಳು

ಜೆಸಿಐ ಉಪ್ಪುಂದದ ಸದಸ್ಯರು ಹಿರಿಯ ಶಿಕ್ಷಕರ ಮನೆಗೆ ಭೇಟಿ ಸನ್ಮಾನ

ಸೆಪ್ಟೆಂಬರ್ 5  ಶಿಕ್ಷಕರ ದಿನಾಚರಣೆ ಯಂದು ಉಪ್ಪುಂದದ ಸರ್ವ ಸದಸ್ಯರು ತಮಗೆ ವಿದ್ಯೆ ನೀಡಿದ ಗುರುಗಳಾದ ಶ್ರೀ.ಐ.ನಾರಾಯಣ್ ಮಾಸ್ಟರ್ ಹಾಗೂ ಶಾರದಾ ದಂಪತಿಗಳ ಮನೆಗೆ ಭೇಟಿ ನೀಡಿ ಗೌರವಿಸಿದರು.

ಈ ಕಾರ್ಯಕ್ರಮದಲ್ಲಿ ಜೆಸಿಐ ಉಪ್ಪುಂದದ ಅಧ್ಯಕ್ಷರಾದ ಪುರುಷೋತ್ತಮದಾಸ್ ಅಧ್ಯಕ್ಷತೆಯನ್ನು ವಹಿಸಿದ್ದರು,ಪೂರ್ವಾಧ್ಯಕ್ಷರಾದ ಜೇಸಿ ಸೆನೆಟರ್ ಪ್ರಕಾಶ್ ಭಟ್,ಜೇಸಿ ಪುರಂದರ್ ಖಾರ್ವಿ,ಜೇಸಿ ಉದಯ್ ಡಿ.ಆರ್,ಕಾರ್ಯಕ್ರಮದ ನಿರ್ದೇಶಕರಾದ ಜೇಸಿ ನರಸಿಂಹ ದೇವಾಡಿಗ,ಜೇಸಿ ಜಗದೀಶ್ ದೇವಾಡಿಗ,ಸದಸ್ಯರಾದ ಜೇಸಿ ಸೌಮ್ಯಾ,ಜೇಸಿ ಸಂಗೀತಾ ಪುರಂದರ್,ಜೇಸಿ ಸುಪರ್ಣಾ,ಜೇಸಿ ಗಣೇಶ್ ಗಾಣಿಗ,ಜೇಸಿ ಪ್ರದೀಪ್ ಶೆಟ್ಟಿ ಕಾರಿಕಟ್ಟೆ,ಜೇಸಿ ಶಿವಾನಂದ್,ಜೇಸಿ ಗೌರೀಶ್,ಜೇಸಿ ಗುರುರಾಜ ಹೆಬ್ಬಾರ್,ಜೇಸಿ ಪಾಂಡುರಂಗ ದೇವಾಡಿಗ,ಜೇಸಿ ವಿಜಯ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.ವಲಯಾಧಿಕಾರಿ ಸುಬ್ರಹ್ಮಣ್ಯ ಜಿ. ಕಾರ್ಯಕ್ರಮ ನಿರೂಪಿಸಿ ಜೇಸಿ ಪ್ರದೀಪ್ ಶೆಟ್ಟಿ ಕಾರಿಕಟ್ಟೆ ವಂದನಾರ್ಪಣೆಗೈದರು.ಜೇಸಿ ರಾಮಕೃಷ್ಣ ಖಾರ್ವಿ ಜೇಸಿವಾಣಿ ವಾಚಿಸಿದರು.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker