ರಾಷ್ಟ್ರೀಯ

‘ಸರ್ಕಾರಿ’ ನೌಕರರಿಗೆ ಮೋದಿ ಸರ್ಕಾರದಿಂದ ಬಿಗ್ ಶಾಕ್

50 ವರ್ಷ ಮೇಲ್ಪಟ್ಟ ಸರ್ಕಾರಿ ಉದ್ಯೋಗಿಗಳಿಗೆ ಈಗ ನಡುಕ ಶುರುವಾಗಿದೆ. ಸರ್ಕಾರಿ ಕೆಲಸ ಖಾಯಂ ಕೆಲಸ ಎಂಬ ಅಭಿಪ್ರಾಯವಿದೆ. ನಿವೃತ್ತಿ ಯವರೆಗೆ ಯಾವುದೇ ಕೆಲಸ ಕಳೆದುಕೊಳ್ಳುವ ಭಯವಿಲ್ಲದೆ ಇಲ್ಲಿ ಕೆಲಸ ಮಾಡಬಹುದು ಎಂಬ ನಂಬಿಕೆಯಿದೆ. ಆದ್ರೆ ಮೋದಿ ಸರ್ಕಾರ ಬೇರೆ ಪ್ಲಾನ್ ಮಾಡಿದೆ.

50 ವರ್ಷ ಮೇಲ್ಪಟ್ಟ ಸರ್ಕಾರಿ ನೌಕರರ ಕಾರ್ಯ ಕ್ಷಮತೆ ಮೇಲೆ ಕಣ್ಣಿಟ್ಟಿದೆ. ಸತತ ಮೂರು ತಿಂಗಳಿಗೊಮ್ಮೆ ಅವರ ಕಾರ್ಯವೈಖರಿ ಬಗ್ಗೆ ಪರಿಶೀಲಿಸುವಂತೆ ಎಲ್ಲ ಸಚಿವಾಲಯ, ಇಲಾಖೆಗೆ ಸೂಚನೆ ನೀಡಿದೆ. ಒಂದು ವೇಳೆ ನೌಕರರ ಕಾರ್ಯ ಕ್ಷಮತೆ ಉತ್ತಮವಾಗಿಲ್ಲದಿದ್ದರೆ, ಅಂತಹ ಉದ್ಯೋಗಿಗಳನ್ನು ಉದ್ಯೋಗದಿಂದ ತೆಗೆದು ಹಾಕುವ ತಯಾರಿ ನಡೆಸಿದೆ.

ಈ ಆದೇಶದ ಪ್ರಕಾರ, ಎಲ್ಲಾ ಕೇಂದ್ರ ಸಚಿವಾಲಯ ಗಳು ಮತ್ತು ಇಲಾಖೆಗಳು ರಿಜಿಸ್ಟರ್ ಸಿದ್ಧಪಡಿಸ ಬೇಕು. ಇದು 50/55 ವರ್ಷ ದಾಟಿದ ನೌಕರರ ವಿವರಗಳನ್ನು ಒಳಗೊಂಡಿರುತ್ತದೆ. ಇವರು ಮೂವತ್ತು ವರ್ಷಗಳ ಸೇವೆ ಪೂರ್ಣಗೊಳಿಸಿರ ಬೇಕಾಗುತ್ತದೆ. ನೌಕರ ಕಾರ್ಯಕ್ಷಮತೆಯಲ್ಲಿ ದುರ್ಬಲನಾಗಿ ಕಂಡುಬಂದರೆ, ಅವನ ಸೇವೆಗಳನ್ನು ಕೊನೆಗೊಳಿಸಲಾಗುವುದು.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker