ರಾಜ್ಯ

ನಟಿ ರಾಗಿಣಿ ವಿಚಾರಣೆ ಆರಂಭಿಸಿದ ಸಿಸಿಬಿ ಅಧಿಕಾರಿಗಳು

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟು ಪ್ರಕರಣ ಸಂಬಂಧ ನಟಿ ರಾಗಿಣಿ ದ್ವಿವೇದಿಯನ್ನು ವಶಕ್ಕೆ ಪಡೆದ ಸಿಸಿಬಿ ಪೊಲೀಸರು ನಟಿಯನ್ನು ಸಿಸಿಬಿ ಕಚೇರಿಗೆ ಕರೆತಂದಿದ್ದಾರೆ.

ಈಗಾಗಲೇ ಸಿಸಿಬಿ, ವಿಚಾರಣೆಗೆ ಹಾಜರಾಗುವಂತೆ ಎರಡು ಬಾರಿ ನಟಿಗೆ ನೋಟೀಸ್ ನೀಡಿತ್ತು. ಆದಾಗ್ಯೂ ನಟಿ ರಾಗಿಣಿ ವಿಚಾರಣೆಗೆ ಹಾಜರಾಗದೇ ಸೋಮವಾರ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದರು. ಇದರ ಬೆನ್ನಲ್ಲೇ ಇಂದು ಬೆಳಿಗ್ಗೆ ಏಕಾಏಕಿ ಸಿಸಿಬಿ ಅಧಿಕಾರಿಗಳು ರಾಗಿಣಿ ನಿವಾಸದ ಮೇಲೆ ದಾಳಿ ಮಾಡಿ ನಟಿಯನ್ನು ವಶಕ್ಕೆ ಪಡೆದಿದ್ದರು.

ನಟಿ ರಾಗಿಣಿಯನ್ನು ಚಾಮರಾಜಪೇಟೆ ಸಿಸಿಬಿ ಕಚೇರಿಗೆ ಕರೆತಂದಿರುವ ಅಧಿಕಾರಿಗಳು, ಇನ್ಸ್ ಪೆಕ್ಟರ್ ಅಂಜುಮಾಲಾ ನಾಯಕ್ ಅವರ ನೇತೃತ್ವದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ಡ್ರಗ್ಸ್ ಪೆಡ್ಲಿಂಗ್ ಆರೋಪದಲ್ಲಿ ರಾಗಿಣಿ ಆಪ್ತ ಆರ್ ಟಿಒ ಆಫೀಸರ್ ರವಿಶಂಕರ್ ಬಂಧನವಾಗಿದ್ದು, ಅವರಿಗೂ ರಾಗಿಣಿಗೂ ಏನು ಸಂಬಂಧ ಹಾಗೂ ಎಷ್ಟು ವರ್ಷಗಳ ಪರಿಚಯ ಇತ್ಯಾದಿ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ ಎನ್ನಲಾಗಿದೆ

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker