ಕರಾವಳಿ

ಶಿವಸೇನಾ ಮುಖಂಡ ರಾಹುಲ್ ಶೆಟ್ಟಿಯ ಬರ್ಬರ ಹತ್ಯೆ..!

ಪುಣೆ : ಮಹರಾಷ್ಟ್ರ ರಾಜ್ಯದ ಪುಣೆಯ ಬಳಿ ಲೊನವಾಲದ ಶಿವಸೇನೆಯ ಮುಖಂಡನನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಮಾಜಿ ಶಿವಸೇನಾ ಮುಖಂಡ ಉಮೇಶ್ ಶೆಟ್ಟಿಯವರ ಪುತ್ರ ರಾಹುಲ್‌ ಶೆಟ್ಟಿ ಕೊಲೆಯಾದವರು ಎಂದು‌ ತಿಳಿದು ಬಂದಿದೆ.

ಮೂಲತಃ ಮಂಗಳೂರಿನವರಾದ ರಾಹುಲ್ ಶೆಟ್ಟಿಯನ್ನು ದುಷ್ಕರ್ಮಿಗಳು ಮೂರು ಬಾರಿ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ರಾಹುಲ್ ಶೆಟ್ಟಿ ಶಿವಸೇನಾ ಅಧ್ಯಕ್ಷರಾಗಿದ್ದರು. ಗುಂಡಿನ ದಾಳಿಯಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಂತರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಹತ್ಯೆಗೆ ಕಾರಣ ತಿಳಿದು ಬರಬೇಕಿದೆ. ನಿನ್ನೆ ಅದೇ ಪರಿಸರದಲ್ಲಿ ಗಣೇಶ್ ನಾಯ್ಡ ಕೊಲೆ ಯಾಗಿತ್ತು. ಇಂದು ರಾಹುಲ್ ಶೆಟ್ಟಿ ಕೊಲೆಯಾಗಿದೆ. ಹತ್ಯೆ ನಡೆದ ಸ್ಥಳದಲ್ಲಿ ಪೊಲೀಸರಿಗೆ ಸಿಸಿ ಕ್ಯಾಮರಾದ ದೃಶ್ಯಗಳು ಲಭ್ಯವಾಗಿದೆ. ಅದರಂತೆ ‌ಪೊಲೀಸರು ತನಿಖೆ‌ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker