ರಾಜ್ಯ

ಮದುವೆಗೆಂದು ಬಂದು ಮಸಣ ಸೇರಿದ ದುರ್ದೈವಿಗಳು : ನಾಲ್ವರು ನೀರುಪಾಲು, ಇಬ್ಬರ ಮೃತ ದೇಹ ಪತ್ತೆ Udupi News

ಮೂಡಬಿದ್ರೆ :  ನದಿ ನೀರಿನಲ್ಲಿ ಮುಳುಗಿ ನಾಲ್ವರು ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದ್ರೆ ತಾಲೂಕಿನ ಪಾಲಡ್ಕ ಗ್ರಾಮದ ಕಡಂದಲೆಯ ಶಾಂಭವಿ ನದಿಯಲ್ಲಿ ನಡೆದಿದೆ.

ಮೃತರನ್ನು ಮೂಡುಶೆಡ್ಡೆಯ ನಿಖಿಲ್ (18), ಹರ್ಷಿತಾ (20), ವೇಣೂರಿನ ಸುಭಾಶ್ (19), ಬಜ್ಪೆಯ ರವಿ(30) ಎಂದು ಗುರುತಿಸಲಾಗಿದೆ. ಇದರಲ್ಲಿ ಮೊದಲಿಗೆ ಓರ್ವ ಮುಳುಗಿದ್ದು, ಅವನನ್ನು ಕಾಪಾಡಲು ಯುವತಿ ಸೇರಿ ಮೂವರು ನೀರಿಗೆ ಇಳಿದಿದ್ದಾರೆ. ನಾಲ್ವರಿಗೂ ಈಜು ಬಾರದ ಕಾರಣ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಈ ನಾಲ್ವರು ಮದುವೆಗೆಂದು ಮೂಡುಬಿದ್ರೆ ತಾಲೂಕಿನ ಪಾಲಡ್ಕ ಗ್ರಾಮಕ್ಕೆ ಬಂದಿದ್ದರು. ಈ ವೇಳೆ ಗ್ರಾಮದಲ್ಲಿ ಹರಿಯುವ ಶಾಂಭವಿ ನದಿಯಲ್ಲಿ ಆಟವಾಡಲು ಹೋಗಿದ್ದಾರೆ. ನದಿ ಮದ್ಯೆ ಮರಳನ್ನು ತೆಗೆದು ಆಳವಾಗಿದ್ದು, ಗಮನಕ್ಕೆ ಬಾರದಿರುವು ದರಿಂದ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಸದ್ಯ ಯುವತಿಯ ಮತ್ತು ಓರ್ವ ಯುವಕನ ಮೃತದೇಹ ಸಿಕ್ಕಿದ್ದು, ಇನ್ನಿಬ್ಬರ ಮೃತದೇಹಕ್ಕೆ ಶೋಧ ಕಾರ್ಯ ಮುಂದುವರೆದಿದೆ. ಮೂಡಬಿದ್ರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker