ರಾಷ್ಟ್ರೀಯ

ದುಡಿಯುವ ಸದಸ್ಯರನ್ನು ಕಳೆದುಕೊಂಡ ಕುಟುಂಬಗಳಿಗೆ ಪಿಂಚಣಿ!

ನವದೆಹಲಿ: ದೇಶದೆಲ್ಲಡೆ ಕರೋನ ರುದ್ರತಾಂಡವಾಡುತ್ತಿದ್ದು, ಕೊರೋನಾ ಸೋಂಕಿಗೆ ಒಳಗಾದ ಕುಟುಂಬಗಳಿಗೆ ನೆರವಾಗಲು ಕೇಂದ್ರ ಸರ್ಕಾರ ಶನಿವಾರ ಹಲವು ಕಲ್ಯಾಣ ಕ್ರಮಗಳನ್ನು ಪ್ರಕಟಿಸಿದೆ.

ಹೌದು, ಕರೋನ ಮಹಾಮಾರಿಯಿಂದಾಗಿ ಮನೆಯ ದುಡಿಯುವ ಸದಸ್ಯರನ್ನು ಕಳೆದುಕೊಂಡ ಕುಟುಂಬಗಳಿಗೆ ನೌಕರರ ರಾಜ್ಯ ವಿಮಾ ನಿಗಮ(ಇಎಸ್ಐಸಿ) ಅಡಿಯಲ್ಲಿ ಕುಟುಂಬ ಪಿಂಚಣಿ ನೀಡಲಾಗುವುದು ಎಂದು ಸರ್ಕಾರ ಘೋಷಿಸಿದೆ. ಇಂತಹ ಕುಟುಂಬಗಳಿಗೆ ಇಡಿಎಲ್ಐ ಯೋಜನೆ ಅಡಿಯಲ್ಲಿ ವಿಮಾ ನೀಡಲಾಗುವುದು ಎಂದು ಪ್ರದಾನ ಮಂತ್ರಿ ಕಚೇರಿ ಪಿಎಂಒ ತಿಳಿಸಿದೆ.

ಇನ್ನು, ಇದರಿಂದಾಗಿ ಕೊರೋನಾ ಪೀಡಿತ ಕುಟುಂಬಗಳಿಗೆ ಆರ್ಥಿಕ ಸಹಾಯವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker