ರಾಜ್ಯ

ಮಂಗಳೂರು ಲೆಕ್ಕ ಪರಿಶೋಧಕರಿಂದ ಕೋವಿಡ್ ನಿಧಿ ಸಮರ್ಪಣೆ

ಭಾರತೀಯ ಲೆಕ್ಕ ಪರಿಶೊಧಕರ ಸಂಘದ ಮಂಗಳೂರು ಶಾಖೆಯ ವತಿಯಿಂದ ನಗರದ ವೆನ್ಲಾಕ್ ಆಸ್ಪತ್ರೆಗೆ ಸುಮಾರು ರು. 7.41 ಲಕ್ಷ ಮೌಲ್ಯದ ವೈದ್ಯಕೀಯ ಉಪಕರಣ ಹಾಗು ವಸ್ತುಗಳನ್ನು ನೀಡಲಾಯಿತು. ಮಾನ್ಯ ಲೋಕಸಭಾ ಸದಸ್ಯರಾದ ಶ್ರೀ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಉಸ್ತುವಾರಿ ಸಚಿವಾರಾದ ಶ್ರೀ ಕೋಟ ಶ್ರೀನಿವಾಸ್ ಪೂಜಾರಿ, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ ವಿ ಇವರ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು .

ಈ ಸಂದರ್ಭದಲ್ಲಿ ಜಿಲ್ಲಾ ಅರೋಗ್ಯ ಅಧಿಕಾರಿ ಡಾ.ಸದಾಶಿವ್ ಶಾನಭಾಗ್, ಡಾ.ಜೂಲಿಯನ್ ಸಲ್ಡಾನ, ಆರ್.ಎಂ.ಓ; ಐಸಿಎಐ ಮಂಗಳೂರು ಶಾಖೆಯ ಅಧ್ಯಕ್ಷರಾದ ಸಿಎ ಕೆ ಸುಬ್ರಮಣ್ಯ ಕಾಮತ್, ಸಿಎ ಪ್ರಸನ್ನ ಶೆಣೈ ಎಂ, ಕಾರ್ಯದರ್ಶಿ; ಸಿಎ ಗೌತಮ್ ಶೆಣೈ, ಖಜಾಂಚಿ; ಸಿಎ ಗೌತಮ್ ಪೈ,ಸಿಕಾಸ ಅಧ್ಯಕ್ಷರು; ಸಿಎ ಎಸ್. ಎಸ್.ನಾಯಕ್, ನಿಕಟಪೂರ್ವ ಅಧ್ಯಕ್ಷರು; ಸಿಎ ಶಾಂತಾರಾಮ ಶೆಟ್ಟಿ, ಅಧ್ಯಕ್ಷರು ಜಿಲ್ಲಾ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker