ರಾಜ್ಯ

ಕರ್ನಾಟಕದ ಎಲ್ಲಾ ಜಿಲ್ಲೆಗಳಿಂದ ಕೇರಳಕ್ಕೆ ಜು.12ರಿಂದ ಬಸ್​ ಓಡಾಟ ಪುನರಾರಂಭ; ಆದರೆ 2 ಕಂಡೀಷನ್ಸ್ ಪಾಲಿಸಲೇಬೇಕು..!

ಬೆಂಗಳೂರು: ರಾಜ್ಯದಿಂದ ಕೇರಳಕ್ಕೆ ಸಾರಿಗೆ ಕಾರ್ಯಾಚರಣೆ ಪುನರಾರಂಭಿಸಲು ಆದೇಶಿಸಲಾಗಿದೆ. ಇದೆ ತಿಂಗಳ ೧೨ ನೇ ತಾರೀಖಿನಿಂದ ಬೆಂಗಳೂರು, ಮೈಸೂರು, ಮಂಗಳೂರು, ಪುತ್ತೂರು ಒಳಗೊಂಡಂತೆ ರಾಜ್ಯದ ವಿವಿಧ ಸ್ಥಳಗಳಿಂದ ಕೇರಳಕ್ಕೆ ಬಸ್ ಸಂಚಾರ ಮಾಡಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಆದೇಶ ಹೊರಡಿಸಿದೆ.

ಶಿಕ್ಷಣ, ವ್ಯವಹಾರ ಇನ್ನಿತರೆ ಕಾರಣಕ್ಕೆ ನಿತ್ಯ ಪ್ರಯಾಣಿಕರು ಕೇರಳ ಹಾಗೂ ಕರ್ನಾಟಕ ನಡುವೆ ಪ್ರಯಾಣ ಮಾಡುತ್ತಾರೆ. ಕರ್ನಾಟಕ ಸರ್ಕಾರದ ಮಾರ್ಗಸೂಚಿಯಂತೆ ಕೇರಳದಿಂದ ರಾಜ್ಯಕ್ಕೆ ಬರುವ ಪ್ರಯಾಣಿಕರು, 72 ಗಂಟೆಯೊಳಗೆ ಕೋವಿಡ್ ಟೆಸ್ಟ್ ಮಾಡಿಸಿ ಕೋವಿಡ್ ನೆಗೆಟಿವ್ ರಿಪೋರ್ಟ್ ಹೊಂದಿರುವುದು ಕಡ್ಡಾಯ. ಇಲ್ಲವಾದಲ್ಲಿ ಕನಿಷ್ಠ ಒಂದು ವ್ಯಾಕ್ಸಿನ್ ಹಾಕಿಸಿರುವ ಪ್ರಮಾಣ ಪತ್ರವನ್ನ ಹೊಂದಿರಬೇಕು.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker