ಕರಾವಳಿ

ಕಟಪಾಡಿ: ಬೈಕ್ ಸವಾರ ಬಸ್ಸಿನ ಚಕ್ರದಡಿಗೆ ಸಿಲುಕಿ ಸಾವು!!

ಕಾಪು: ಬಸ್ಸೊಂದು ಬೈಕಿಗೆ ಡಿಕ್ಕಿಯಾಗಿ ಬೈಕ್ ಸವಾರ ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ಕಟಪಾಡಿ ಜಂಕ್ಷನ್ ಬಳಿ ಶುಕ್ರವಾರ ರಾತ್ರಿ ಸಂಭವಿಸಿದೆ.

ಕಟಪಾಡಿ ಅಚ್ಚಡ ವಿದ್ಯಾನಗರ ನಿವಾಸಿ ಯಶೋಧರ ಆಚಾರ್ಯ (೫೦) ಮೃತಪಟ್ಟವರು. ಕಟಪಾಡಿಯ ಗ್ಲಾಸ್ ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಇವರು,ಬೈಕ್ ಸವಾರಿ ಮಾಡಿಕೊಂಡು ಶಿರ್ವಾ ರಸ್ತೆಯಿಂದ ಹೊರಟು ಹೆದ್ದಾರಿ ದಾಟುತ್ತಿದ್ದಾಗ ಮಂಗಳೂರು ಕಡೆಯಿಂದ ಅತೀ ವೇಗವಾಗಿ ಬಂದ ಬಸ್ಸು ಬೈಕ್ ಗೆ ಡಿಕ್ಕಿ ಹೊಡೆದಿದೆ.ಪರಿಣಾಮ ಬೈಕ್ ಚಕ್ರದಡಿ ಸಿಲುಕಿ ಹೆದ್ದಾರಿಯಲ್ಲಿ ೫0 ಅಡಿ ದೂರಕ್ಕೆ ಎಳೆದೊಯ್ಯಿದಿದೆ.ಅಪಘಾತದ ತೀವೃತೆಗೆ ಗಂಭೀರವಾಗಿ ಗಾಯಗೊಂಡ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿದ್ದು,ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದಾರೆ .

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker