ಕರಾವಳಿ

ಉಡುಪಿ : ಫೇಸ್‌ಬುಕ್‌ ನಲ್ಲಿ ಪರಿಚಯವಾದ ವ್ಯಕ್ತಿ , ಉಡುಪಿ ಮಹಿಳೆಗೆ 19 ಲಕ್ಷ ರೂ ವಂಚನೆ..!

ಉಡುಪಿ : ಮಹಿಳೆಯೊಬ್ಬರಿಗೆ ಫೇಸ್‌ಬುಕ್‌ ನಲ್ಲಿ ಪರಿಚಯಗೊಂಡ ವ್ಯಕ್ತಿ ಫಾರ್ಮಸಿ ತೆರೆಯಲೆಂದು ೧೯ ಲಕ್ಷ ರೂ. ಪಡೆದು ವಂಚನೆ ನಡೆಸಿದ ಪ್ರಕರಣ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ  ದಾಖಲಾಗಿದೆ.

ಕುವೈಟ್‌ ದೇಶದಲ್ಲಿ ಉದ್ಯೋಗದಲ್ಲಿದ್ದ ಲಿನೆಟ್ ಸಿಮಾ ರೊಡ್ರಿಗಸ್‌ (೩೮) ಅವರನ್ನು ಫೇಸ್ ಬುಕ್ ಮೂಲಕ ಪರಿಚಯ ಮಾಡಿಕೊಂಡ.

ಆರೋಪಿ ಡಾ| ಆಯಂಡ್ರಿವ್‌ ಫೆಲಿಕ್ಸ್‌, ವಾಟ್ಸಪ್‌ ಮೂಲಕ ಸಂಪರ್ಕ ಹೊಂದಿ️, ವೈದ್ಯನೆಂದು ತಿಳಿಸಿದ್ದು ಜತೆಗೆ ದೆಹಲಿಯಲ್ಲಿ ಒಂದು ಫಾರ್ಮಸಿ ತೆರೆಯುವುದಾಗಿ ನಂಬಿಸಿ ಹಂತ ಹಂತವಾಗಿ ೧೯ ಲಕ್ಷ ರೂ. ಮೊತ್ತವನ್ನು ಬ್ಯಾಂಕ್‌ ಖಾತೆಗೆ ವರ್ಗಾಯಿಸಿಕೊಂಡು ಮೋಸ ಹಾಗೂ ನಂಬಿಕೆ ದ್ರೋಹ ಎಸಗಿರುವುದಾಗಿ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker