ಅಂತಾರಾಷ್ಟ್ರೀಯ

ವಿಶ್ವ ಅಥ್ಲೆಟಿಕ್ಸ್: ಲಾಂಗ್ ಜಂಪ್ ನಲ್ಲಿ ಭಾರತಕ್ಕೆ ಬೆಳ್ಳಿ ಪದಕ..!

ನೈರೋಬಿ: ಕೀನ್ಯಾದ ನೈರೋಬಿಯಲ್ಲಿ ಭಾನುವಾರ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ ಇದರ 20ರ ಒಳಗಿನ ವಯೋಮಿತಿ ವಿಭಾಗದ ಲಾಂಗ್ ಜಂಪ್ ಸ್ಪರ್ಧೆಯಲ್ಲಿ ಭಾರತದ ಶೈಲಿ ಸಿಂಗ್ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ.

ತನ್ನ ಮೂರನೇ ಪ್ರಯತ್ನದಲ್ಲಿ 6.59ಮಿ ದೂರ ಜಿಗಿಯುವ ಮೂಲಕ 17ರ ಹರೆಯದ ಶೈಲಿ ಸಿಂಗ್ ರಜತ ಪದಕಕ್ಕೆ ಕೊರಳೊಡ್ಡಿದರು. ಸ್ವೀಡನ್ ದೇಶದ ಮಜಾ ಅಸ್ಕಾಗ್ 6.60ಮಿ ದೂರ ಜಿಗಿದು ಚಿನ್ನದ ಪದಕ ಗೆದ್ದರು.

ಶೈಲಿ ಸಿಂಗ್ ಅವರು ಮಾಜಿ ಲಾಂಗ್ ಜಂಪ್ ತಾರೆ ಅಂಜು ಬಾಬಿ ಜಾರ್ಜ್ ಮತ್ತು ರಾಬರ್ಟ್ ಬಾಬಿ ಜಾರ್ಜ್ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker