ರಾಜ್ಯ

ಡಾ. ಎಂ. ಆರ್‌ ಕೃಷ್ಣಮೂರ್ತಿ ಅವರ ಶಿಷ್ಯೆ ಜಾಜಿ ರಾಜು ರಂಗ ಪ್ರವೇಶ

ಕಲಾಕ್ಷಿತಿ ಸ್ಕೂಲ್‌ ಆಫ್‌ ಫೈನ್‌ ಆರ್ಟ್‌ ವತಿಯಿಂದ ಜಯನಗರದ ಜೆಎಸ್‌ಎಸ್‌ ಸಭಾಂಗಣದ ಶಿವರಾತ್ರೀಶ್ವರ ಕೆಂದ್ರದಲ್ಲಿ ನಡೆದ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮದಲ್ಲಿ ಡಾ.ಎಂ.ಆರ್‌ ಕೃಷ್ಣಮೂರ್ತಿ ಅವರ ಶಿಷ್ಯೆ ಜಾಜಿ ರಾಜು ಭರತನಾಟ್ಯ ಪ್ರಸ್ತುತಪಡಿಸಿದರು.

ಆದಿಚುಂಚನಗಿರಿ ಮಠದ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದ ಸ್ವಾಮೀಜಿ ಗಳ ದಿವ್ಯ ಸಾನಿಧ್ಯದಲ್ಲಿ ನಡೆದ ರಂಗಪ್ರವೇಶ ಕಾರ್ಯಕ್ರಮದಲ್ಲಿ ಡಾನ್ಸ್‌ ಹಿಸ್ಟೋರಿಯನ್‌ ಶ್ರೀಮತಿ ಕರುಣಾ ವಿಜಯೇಂದ್ರ, ನಟರಾಜ ನೃತ್ಯ ಶಾಲಾ ನಿರ್ದೇಶಕಿ ಗುರು ಶ್ರೀಮತಿ ವಸುಂದರಾ ಸಂಪತ್‌ ಕುಮಾರ್‌, ಕಂದಾಯ ಸಚಿವರಾದ ಆರ್‌ ಅಶೋಕ್‌, ಸಂಸದ ತೇಜಸ್ವಿ ಸೂರ್ಯ, ಬೊಮ್ಮನಹಳ್ಳಿ ಶಾಸಕ ಸತೀಶ್‌ ರೆಡ್ಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಜಾಜಿ ರಾಜು, ಶ್ರೀಮತಿ ಸುನಿತಾ ಮತ್ತು ಮೋಹನ್‌ ರಾಜು ಅವರ ಮಗಳು. ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಖ್ಯಾತ ನಾಟಕಕಾರ ಬಿ ಬೋರೇಗೌಡ ಅವರ ಮೊಮ್ಮಗಳು. ಸ್ವತಃ ಭರತನಾಟ್ಯ ಕಲಾವಿದೆ ಆಗಿರುವ ತಮ್ಮ ತಾಯಿ ಸುನಿತಾ ಅವರ ಮಾರ್ಗದರ್ಶನದಲ್ಲಿ ಸಣ್ಣ ವಯಸ್ಸಿನಿಂದಲೇ ಭರತನಾಟ್ಯವನ್ನು ಅಭ್ಯಸಿಸುತ್ತಿದ್ದಾರೆ.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker