ತಾಜಾ ಸುದ್ದಿಗಳುರಾಷ್ಟ್ರೀಯ

ರಾಷ್ಟ್ರೀಯ ನೀಟ್ 2021 ಪರೀಕ್ಷೆ ಮುಂದೂಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್

ಸೆಪ್ಟೆಂಬರ್ 12 ರಂದು ನಡೆಯಲಿರುವ ವೈದ್ಯಕೀಯ ಪ್ರವೇಶ ಪರೀಕ್ಷೆ, ನೀಟ್ 2021 ಅನ್ನು ಮುಂದೂಡುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದ್ದು, ಪರೀಕ್ಷೆ ಮುಂದೂಡಲಾಗದು ಎಂದಿದೆ. ಖಾಸಗಿ ಸಿಬಿಎಸ್‌ಇ ವಿದ್ಯಾರ್ಥಿಗಳು ಸೇರಿದಂತೆ ಹಲವರು ಸಲ್ಲಿಸಿದ ಅರ್ಜಿಯನ್ನು ಸುಪ್ರೀಂಕೋರ್ಟ್ ತಳ್ಳಿ ಹಾಕಿದೆ.

ಈ ಬಾರಿ 16 ಲಕ್ಷ ಅಭ್ಯರ್ಥಿಗಳು ನೀಟ್ ಪರೀಕ್ಷೆ ಬರೆಯಲಿದ್ದಾರೆ. ಇವರಲ್ಲಿ ಸಾವಿರಾರು ವಿದ್ಯಾರ್ಥಿಗಳು ನೀಟ್ ಪರೀಕ್ಷೆಯ ಮುಂದೂಡಿಕೆಗೆ ಒತ್ತಾಯಿಸಿದ್ದರು. ನೀಟ್ ಪರೀಕ್ಷೆಯ ಪ್ಯಾಟರ್ನ್ ಬದಲಾಗಿರುವುದರಿಂದ ಎರಡೇ ತಿಂಗಳೊಳಗೆ ವಿದ್ಯಾರ್ಥಿಗಳಿಗೆ ತಯಾರಿ ನಡೆಸುವುದು ಕಷ್ಟವಾಗುತ್ತಿದೆ, ನೀಟ್ ಪರೀಕ್ಷೆಯ ಆಸುಪಾಸಿನಲ್ಲೇ ಸಿಬಿಎಸ್ಇ, ಕರ್ನಾಟಕದ ಕಾಮೆಡ್ಕೆ, ಒರಿಸ್ಸಾ ಜೆಇಇ, ಮಧ್ಯಪ್ರದೇಶದ 12ನೇ ತರಗತಿ ಪರೀಕ್ಷೆಗಳಿವೆ ಎಂಬ ಕಾರಣಕ್ಕೆ ಅಕ್ಬೋಬರ್ ವರೆಗೆ ಮುಂದೂಡುವಂತೆ ಈ ಬಗ್ಗೆ ಟ್ವಿಟ್ಟರ್ ಅಭಿಯಾನವೂ ನಡೆದಿತ್ತು.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker