ರಾಜ್ಯ
Trending

8 ಮಂದಿ ಶಾಲಾ ಶಿಕ್ಷಕರಿಗೆ ಕೊರೊನ ಸೋಂಕು ಪತ್ತೆ !

ಧಾರವಾಡ: ಶಾಲೆ ಆರಂಭ ಮೊದಲೇ  ಆಘಾತಕಾರಿ ಸುದ್ದಿಯೊಂದು ಶಿಕ್ಷಕರಲ್ಲಿ ಹಾಗು ಪೋಷಕರಲ್ಲಿ  ಆತಂಕ ಮೂಡಿಸಿದೆ. ಧಾರವಾಡದ ಪ್ರತಿಷ್ಠಿತ ಶಾಲೆಯ 8 ಮಂದಿ ಶಾಲಾ ಶಿಕ್ಷಕರಲ್ಲಿ ಮಹಾಮಾರಿ ಕೊರೊನಾ ಸೋಂಕು ಪತ್ತೆಯಾಗಿದೆ.

ಧಾರವಾಡದ  ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 121ಕ್ಕೆ ಏರಿಕೆಯಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಧಾರವಾಡ ನಗರದ ಯಾಲಕ್ಕಿ ಶೆಟ್ಟರ್ ಕಾಲನಿಯ ಶಿಕ್ಷಕಿಗೆ ಸೋಂಕು ದೃಢಪಟ್ಟಿತ್ತು. ಬಳಿಕ ಅವರ ಪತಿಯಲ್ಲೂ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದವು. ಇದೀಗ ಈ ಶಿಕ್ಷಕಿಯು ಸಂಪರ್ಕಕ್ಕೆ ಬಂದಿದ್ದ ಇನ್ನುಳಿದ ಏಳು ಜನ ಶಿಕ್ಷಕರಲ್ಲೂ ಭಾನುವಾರದಂದು ಸೋಂಕು ದೃಢಪಟ್ಟಿದೆ.

ಸೋಂಕು ಬಂದ ಶಿಕ್ಷಕಿ ಶಾಲೆಯ ಪೂರ್ವಭಾವಿ ಸಭೆಯಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಸೋಂಕು ಬಂದಿದೆ. ಜೂನ್ 8ರಂದು ಪೂರ್ವಭಾವಿ ಸಭೆ ನಡೆದಿತ್ತು. ಸಭೆಯಲ್ಲಿ ಸೋಂಕಿತ ಶಿಕ್ಷಕಿ ಜೊತೆ ಸಂಪರ್ಕಕ್ಕೆ ಬಂದ 7 ಮಂದಿ ಶಿಕ್ಷಕರಿಗೆ ಸೋಂಕು ದೃಢವಾಗಿದೆ. 24 ಮಂದಿ ಪೂರ್ವಭಾವಿ ಸಭೆಯಲ್ಲಿ ಭಾಗಿಯಾಗಿದ್ದರು. ಈಗ 24 ಜಿಲ್ಲಾಡಳಿತ ಎಲ್ಲರನ್ನು ಕ್ವಾರಂಟೈನ್ ಮಾಡಿದೆ.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker