ರಾಜ್ಯ
Trending

ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿರುವ ನಟಿ ಶುಭಾ ಪೂಂಜಾ!

ಸ್ಯಾಂಡಲ್ವುಡ್ ಮೊಗ್ಗಿನ ಮನಸಿನ ಹುಡುಗಿ ನಟಿ ಶುಭಾ ಪೂಂಜಾಗೆ ಕಂಕಣ ಭಾಗ್ಯ ಕೂಡಿ ಬಂದಿದೆ ನಟಿ ಶುಭಾ ಪೂಂಜಾ ಸುಮಂತ್ ಎಂಬ ಹುಡುಗನ ಕೈ ಹಿಡಿಯುತ್ತಿದ್ದಾರೆ.ಸುಮಂತ್ ಮಹಾಬಲ ಮಂಗಳೂರು ಮೂಲದವರಾಗಿದ್ದು, ಜಯಕರ್ನಾಟಕ ಬೆಂಗಳೂರು ಸೌತ್ ವಿಂಗ್ ಪ್ರೆಸಿಡೆಂಟ್ ಆಗಿದ್ದಾರೆ. ಅಲ್ಲದೇ ಸುಮಂತ್ ಮಹಾಬಲ ಬಿಸಿನೆಸ್ ಮ್ಯಾನ್ ಕೂಡ ಆಗಿದ್ದಾರೆ.

ಸುಮಂತ್ ಮತ್ತು ಶುಭಾ ಪೂಂಜಾ ಇಬ್ಬರು ಪರಸ್ಪರ ಒಂದು ವರ್ಷದಿಂದ ಪ್ರೀತಿಸುತ್ತಿದ್ದರು. ಇಬ್ಬರು ತಮ್ಮ ಪ್ರೀತಿಯ ವಿಚಾರವನ್ನು ಕುಟುಂಬದವರ ಬಳಿ ಹೇಳಿಕೊಂಡಿದ್ದಾರೆ. ಎರಡು ಕುಟುಂಬದರು ಇವರ ಪ್ರೀತಿ ಒಪ್ಪಿಗೆ ಸೂಚಿಸಿದ್ದು, ಇದೇ ವರ್ಷ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.  ನಟಿ ಶುಭಾ ಪೂಂಜಾ ಕನ್ನಡ ಮತ್ತು ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದು, ಕನ್ನಡದಲ್ಲಿ ಸುಮಾರು 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಸಿದ್ದಾರೆ. ಇದೇ ವರ್ಷ ನಟಿ ಶುಭಾ ಪೂಂಜಾ ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ.

 

 

 

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker