ಕರಾವಳಿ

ಅರಿವು ಜ್ಞಾನಕ್ಕೆ ಪ್ರೇರಣೆ ಕಾರ್ಯಕ್ರಮದಲ್ಲಿ ಶಾಸಕರಾದ ಶ್ರೀ ಕೆ ರಘುಪತಿ ಭಟ್ ಭಾಗಿ

ಉಡುಪಿ ಸೆ. 5: ವಿಜಯ ಕರ್ನಾಟಕ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ “ಶಿಕ್ಷಕರ ದಿನಾಚರಣೆ ಅರಿವು, ಜ್ಞಾನಕ್ಕೆ ಪ್ರೇರಣೆ, ಬದುಕಿಗೆ ದಾರಿ ದೀಪವಾದ ಗುರುಗಳಿಗಿದೋ ನಮನ” ಕಾರ್ಯಕ್ರಮದಲ್ಲಿ ಶಾಸಕರಾದ ಶ್ರೀ ಕೆ ರಘುಪತಿ ಭಟ್ ರವರು ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ಸೆಪ್ಟೆಂಬರ್ ಅಂತ್ಯಕ್ಕೆ ನಿವೃತ್ತಿ ಹೊಂದುತ್ತಿರುವ ಡಿಡಿಪಿಐ ಶೇಷಶಯನ ಕಾರಿಂಜ, ಎಡಗೈಯಲ್ಲಿ ಪರೀಕ್ಷೆ ಬರೆದು ದ್ವಿತೀಯ ಪಿಯುಸಿಯಲ್ಲಿ 558 ಅಂಕ ಗಳಿಸಿದ ಕುಮಾರಿ ರಕ್ಷಾ ನಾಯಕ್, ಬಹುವಿಧ ಕಲಾ ಪ್ರತಿಭಾನ್ವಿತೆ, ಕೊರೊನಾ ಕಾಲದಲ್ಲಿ ನೃತ್ಯ, ಅಭಿನಯದ ವೀಡಿಯೋ ಮೂಲಕ ಮನೆಗಳಲ್ಲೇ ಮಕ್ಕಳ ಕಲಿಕೆಗೆ ಪೂರಕ ನಲಿ ಕಲಿ ಶಿಕ್ಷಣದ ಮಾದರಿ ರೂಪಿಸಿದ ಶಿಕ್ಷಕಿ ವಂದನಾ ರೈ ಹಾಗೂ ಶೈಕ್ಷಣಿಕ ರಂಗದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಜಿ ಜಗದೀಶ್, ಟೀಚರ್ಸ್ ಕೋ ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ಅಶೋಕ್ ಕುಮಾರ್, ಕರ್ನಾಟಕ ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಕಿರಣ್ ಹೆಗ್ಡೆ, ಕರ್ನಾಟಕ ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ಉಡುಪಿ ಜಿಲ್ಲಾಧ್ಯಕ್ಷ ರವೀಂದ್ರ ಹೆಗ್ಡೆ ಮತ್ತು ಇತರ ಪ್ರಮುಖರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker