ತಾಜಾ ಸುದ್ದಿಗಳು

ದಾಂಡೇಲಿಯಲ್ಲಿ ಗ್ರಾಮಕ್ಕೆ ನುಗ್ಗಿ ವಾಕ್ ಮಾಡಿದ ಮೊಸಳೆ!!!

ಕಾರವಾರ: ಕಾಳಿ ನದಿಯಿಂದ ದೈತ್ಯ ಮೊಸಳೆಯೊಂದು ಗ್ರಾಮಕ್ಕೆ ಬಂದ ಘಟನೆ ದಾಂಡೇಲಿಯ ಕೋಗಿಲಬನ ಗ್ರಾಮದಲ್ಲಿ ನಡೆದಿದೆ.

ಆಹಾರ ಅರಸಿ ನದಿ ದಡಕ್ಕೆ ಬಂದ ದೈತ್ಯ ಮೊಸಳೆಯು ದಾಂಡೇಲಿಯ ಕಾಳಿ ನದಿ ಪಕ್ಕದಲ್ಲೇ ಇರುವ ಕೋಗಿಲಬನ ಗ್ರಾಮಕ್ಕೆ ಬಂದಿದ್ದು, ಬೆಚ್ಚಿಬಿದ್ದ ಜನತೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಆದರೆ ಅರಣ್ಯಾಧಿಕಾರಿಗಳು ಬರುವುದರೊಳಗೆ ಮೊಸಳೆಯು ಗ್ರಾಮವನ್ನು ದಾಟಿ ಕಾಡು ದಾರಿಯಲ್ಲೇ ನದಿಗೆ ಸೇರಿಕೊಂಡಿದೆ.

ದಾಂಡೇಲಿಯ ಕಾಳಿ ನದಿಯಲ್ಲಿ ಸಾವಿರಾರು ಮೊಸಳೆಗಳಿದ್ದರೂ ನದಿಯಿಂದ ಗ್ರಾಮಕ್ಕೆ ಬರುತ್ತಿರುವುದು ಇದೇ ಮೊದಲು.

ಈ ಹಿಂದೆ ಹಲವು ಬಾರಿ ನದಿ ಭಾಗದಲ್ಲಿ ಮೊಸಳೆಗಳು ಮನುಷ್ಯನ ಮೇಲೆ ಎರಗಿ ಸಾವುಗಳು ಸಂಭವಿಸಿದ್ದವು ಎಂದು ಹೇಳಲಾಗಿದೆ.

ದಾಂಡೇಲಿಯ ಕಾಗದ ಕಾರ್ಖಾನೆ ಬಳಿ ನದಿ ತಡದಲ್ಲಿ ಅತೀ ಹೆಚ್ಚು ಮೊಸಳೆಗಳು ವಾಸಿಸುತ್ತಿವೆ. ಕಾರ್ಖಾನೆಯ ತ್ಯಾಜ್ಯಗಳೇ ಇವುಗಳಿಗೆ ಆಹಾರವಾಗಿದ್ದು ಲಾಕ್‍ಡೌನ್‍ನಿಂದ ಜನರು ಮತ್ತು ವಾಹನಗಳ ಓಡಾಟಗಳು ವಿರಳವಾಗಿರುವುದರಿಂದ ಆಹಾರ ಅರಸಿ ಮೊಸಳೆಗಳು ನದಿ ದಡದಿಂದ ಸುತ್ತಮುತ್ತ ಓಡಾಟ ನಡೆಸುತಿದ್ದು, ಇಂದು ಗ್ರಾಮಕ್ಕೆ ಮೊಸಳೆ ನುಗ್ಗಿದ್ದರಿಂದ ಇದೀಗ ಜನರಲ್ಲಿ ಮತ್ತೆ ಆತಂಕ ಶುರುವಾಗಿದೆ.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker