ಕರಾವಳಿ

ಸಾಸ್ತಾನದ_ಚೆಲ್ಲಿಮಕ್ಕಿ ಗೋಪಾಲ ಗಾಣಿಗ ನಿಧನ

ಕೋಟ: ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನದ ಮಾಜಿ ಅಧ್ಯಕ್ಷ ಸಾಸ್ತಾನದ ಚೆಲ್ಲೆಮಕ್ಕಿ ನಿವಾಸಿ ಗೋಪಾಲ ಗಾಣಿಗ ಚೆಲ್ಲೆಮಕ್ಕಿ (71) ಜು.23ರಂದು ಬ್ರಹ್ಮಾವರ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು. ಮೃತರು ತಾಯಿ, ಪತ್ನಿ ಹಾಗೂ ಬ್ರಹ್ಮಾವರ ಪ್ರಣವ್ ಆಸ್ಪತ್ರೆಯ ಮುಖ್ಯಸ್ಥ ಡಾ. ಪ್ರವೀಣ್ ಸೇರಿದಂತೆ ಇಬ್ಬರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ.

ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದ ಇವರು ಸಾಲಿಗ್ರಾಮ ಪುರಸಭೆಯಾಗಿದ್ದ ಅವಧಿಯಲ್ಲಿ ಸದಸ್ಯರಾಗಿದ್ದರು ಹಾಗೂ ಚೆಲ್ಲೆಮಕ್ಕಿ ನಾಗಬನ ಸಮಿತಿಯ ಅಧ್ಯಕ್ಷರಾಗಿ, ಉಡುಪಿ ಜಿಲ್ಲಾ
ಸೋಮಕ್ಷತ್ರಿಯ ಗಾಣಿಗ ಸಮಾಜ ಬಾರ್ಕೂರು ಉಪಾಧ್ಯಕ್ಷರಾಗಿ, ಬಾರ್ಕೂರು ವೇಣುಗೋಪಾಲಕೃಷ್ಣ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕರಾಗಿ, ಗುಂಡ್ಮಿ ಮಾಣಿಚೆನ್ನಕೇಶವ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker