ಕರಾವಳಿ

ಮುಂಬಯಿ ಹೊಟೇಲು ಉದ್ಯಮಿ ಕರುಣಾಕರ ಪುತ್ರನ್ ಆತ್ಮಹತ್ಯೆ

ಉಡುಪಿ: ಉಡುಪಿ ಜಿಲ್ಲೆಯ ಬಜೆಗೋಳಿ ಮೂಲದ ಹೊಟೇಲ್ ಉದ್ಯಮಿ ವಿರಾರ್ ಕರುಣಾಕರ್ ಪುತ್ರನ್ ಆರ್ಥಿಕ ಸಂಕಷ್ಟದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮುಂಬೈಯ ತಮ್ಮ ಸ್ಟಾರ್ ಪ್ಲಾನೆಟ್ ಹೊಟೇಲಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ‌.ಇವರು ಸ್ಟಾರ್ ಪ್ಲಾನೆಟ್ ಹೊಟೇಲನ್ನು ಬೇರೆಯವರಿಂದ ಬಾಡಿಗೆಗೆ ಪಡೆದು ನಡೆಸುತ್ತಿದ್ದರು. ಲಾಕ್ ಡೌನ್ ಸಂದರ್ಭದಲ್ಲಿ ತೀವ್ರ ಆರ್ಥಿಕ ಸಂಕಷ್ಟ ತಲೆದೋರಿದ್ದು ಇದರಿಂದ ಬೇಸತ್ತ ಕರುಣಾಕರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಆಪ್ತ ವಲಯ ಮಾಹಿತಿ ನೀಡಿದೆ. ಇಂದು ಕರುಣಾಕರ್ ಅವರ ಪಾರ್ಥಿವ ಶರೀರವನ್ನು ಹುಟ್ಟೂರು ಬಜಗೋಳಿಗೆ ತರಲಾಗಿದೆ.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker