ಕರಾವಳಿ
Trending

ಉಡುಪಿ: ಕೊರೊನಾ ಸೋಂಕಿಗೆ ಎರಡನೇ ಬಲಿ

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಕೊರೋನಾ ಸೋಂಕಿಗೆ ಮತ್ತೊಂದು  ಬಲಿಯಾಗಿದ್ದು ಒಟ್ಟಾರೆ ಜಿಲ್ಲೆಯಲ್ಲಿ ಕೋವಿಡ್ 19 ಕ್ಕೆ ಬಲಿಯಾದವರ ಸಂಖ್ಯೆ 2 ಕ್ಕೆ ಏರಿದೆ.

ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಜಿ ಜಗದೀಶ್ ಅವರು ಗುರುವಾರ ಮಧ್ಯಾಹ್ನ ಮುಂಬೈನಿಂದ ಕುಂದಾಪುರಕ್ಕೆ ಬಂದ ತೆಕ್ಕಟ್ಟೆಯ 54 ವರ್ಷದ  ವ್ಯಕ್ತಿಯೋರ್ವರು ದಿಢೀರ್ ಆಗಿ ಮೃತಪಟ್ಟಿದ್ದು ಅವರ ಗಂಟಲ ದ್ರವ ಪರೀಕ್ಷೇಯ ವೇಳೆ ಅವರಿಗೆ ಕೋವಿಡ್ ಪಾಸಿಟಿವ್ ಇರುವುದು ಪತ್ತೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಗುರವಾರ ಮಧ್ಯಾಹ್ನ ಮಹಾರಾಷ್ಟ್ರದಿಂದ 4 ಮಂದಿ ಬಂದಿದ್ದು ಅವರೆಲ್ಲರೂ ಉಡುಪಿಗೆ ಬಂದಾಗ ಸಂಪೂರ್ಣ ತಪಾಸಣೆ ಮಾಡಲಾಗಿತ್ತು ಈ ಆವೇಳೆ ಅವರಲ್ಲಿ ಯಾವುದೇ ರೀತಿಯ ರೋಗ ಲಕ್ಷಣಗಳು ಕಂಡು ಬಂದಿರಲಿಲ್ಲ. ಆ ಬಳಿಕ ನಾಲ್ವರೂ ಕೂಡ ಹೋಮ್ ಕ್ವಾರಂಟೈನ್ ಗೆ ಒಳಾಗಿದ್ದು ಅವರಲ್ಲಿ ಒರ್ವರು ಮನೆಯಲ್ಲಿಯೇ ಸಾವನಪ್ಪಿದ್ದಾರೆ. ಸಾವಿಗೆ ನಿಖರ ಕಾರಣ ಏನು ಎನ್ನುವುದು   ಪೋಸ್ಟ್ ಮಾರ್ಟಂ ನಿಂದ ತಿಳಿಯಬೇಕು. ಆದರೆ ಅವರ ಗಂಟಲ ದ್ರವ ಪರೀಕ್ಷೆಯಲ್ಲಿ ಪಾಸಿಟಿವ್ ಇರೋದು ಗೊತ್ತಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker