ಕರಾವಳಿ

ಕಾರ್ಕಳದಲ್ಲಿ ವಿವಾಹಿತ ಮಹಿಳೆ ಆತ್ಮಹತ್ಯೆ | ಕಳೆದ ಲಾಕ್ ಡೌನ್ ನಲ್ಲಿ ಪತಿ, ಈ ಲಾಕ್ ಡೌನ್ ನಲ್ಲಿ ಪತ್ನಿ ಸಾವು

ಇತ್ತೀಚೆಗೆ ಗಂಡನನ್ನು ಕಳೆದುಕೊಂಡು ಮನನೊಂದಿದ್ದ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕಿನಲ್ಲಿ ನಡೆದಿದೆ.

ಕಾರ್ಕಳ ತಾಲೂಕಿನ ದುರ್ಗಾ ಗ್ರಾಮದ ಅಶ್ವಥಕಟ್ಟೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಅಶ್ವಥಕಟ್ಟೆ ಬಾಂಕೋಡಿ ರೇಖಾ (33) ಅವರೇ ನೇಣಿಗೆ ಶರಣಾದ ಮಹಿಳೆ.

ಮುಂಬೈನಲ್ಲಿ ಉದ್ಯಮಿ ಆಗಿದ್ದ ರವಿಶೆಟ್ಟಿಯೊಂದಿಗೆ ರೇಖಾಲಿಗೆ ಮಾಡುವೆ ಆಗಿತ್ತು. ಕೇವಲ ಮೂರು ವರ್ಷಗಳ ಹಿಂದೆ ರವಿ ಶೆಟ್ಟಿ ಅವರನ್ನು ಅಶ್ವಥಕಟ್ಟೆ ಬಾಂಕೋಡಿ ರೇಖಾ ಎಂಬವರು ಮದುವೆಯಾಗಿದ್ದರು.

ಕಳೆದ ವರ್ಷ ಲಾಕ್ ಡೌನ್ ನ ಕಾರಣದಿಂದ ಮುಂಬೈ ಉದ್ಯಮಿ ರವಿ ಶೆಟ್ಟಿ ಅವರು ತೀವ್ರ ನಷ್ಟ ಅನುಭವಿಸಿದ್ದರು. ವಿಪರೀತ ನಷ್ಟದಿಂದ ಕಂಗಾಲಾದ ರವಿ ಶೆಟ್ಟಿ ಅವರು ಕಳೆದ ವರ್ಷ ಖಿನ್ನರಾಗಿ ಆತ್ಮಹತ್ಯೆಗೆ ಶರಣಾಗಿದ್ದರು.

ಪತಿಯ ನಿಧನ ಅನಂತರ ರೇಖಾ ಅವರು ತಾಯಿ ತಾರಾ ಶೆಟ್ಟಿ ಅವರೊಂದಿಗೆ ವಾಸವಾಗಿದ್ದರು. ಮದುವೆಗೆ ಮುಂಚೆ ರೇಖಾ ಅವರು ಪ್ರಾಥಮಿಕ ಶಾಲಾಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ್ದರು.

ರೇಖಾ ಅವರು ಇದೀಗ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker