ಕರಾವಳಿ

ಉಡುಪಿ : ಒಂದೇ ಪರಿಸರದ 3 ಮನೆಗಳಿಗೆ ಕಳ್ಳರು ನುಗ್ಗಿ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಕಾಪು ತಾಲೂಕಿನ ಮೂಳೂರಿನಲ್ಲಿ ನಡೆದಿದೆ.

ಉಡುಪಿ : ಒಂದೇ ಪರಿಸರದ ಮೂರು ಮನೆಗಳಿಗೆ ಕಳ್ಳರು ನುಗ್ಗಿ ಲಕ್ಷಾಂತರ ರೂಪಾಯಿ ನಗದ ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮೂಳೂರಿನಲ್ಲಿ ನಡೆದಿದೆ.

ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಅರಿತ ಕಳ್ಳರು ಕಾಪು ತಾಲೂಕಿನ ಮೂಳೂರುವಿ‌ನ ಈಸ್ಟ್ ವೆಸ್ಟ್ ನರ್ಸರಿ ಬಳಿಯ ನಿವಾಸಿಗಳಾದ ಮಹಮ್ಮದ್ ರಫೀಕ್, ಮಧುರಾ ಕಾಂಪೌಂಡ್ನ ಇಬ್ರಾಹಿಂ ಮತ್ತು ಶೆಹನಾಜ್ ಎಂಬವರ ಮನೆಗಳಿಗೆ ನುಗ್ಗಿದ್ದಾರೆ.

ಮನೆಯ ಒಳಗೆ ನುಗ್ಗಿದ ಕಳ್ಳರು ಬೀರೂ ಒಡೆದು ನಗದು ಹಾಗೂ ಚಿನ್ನಾಭರಣಗಳನ್ನು ದೋಚಿದ್ದಾರೆ‌. ಮನೆಯಲ್ಲಿ ಯಾರೂ ಇಲ್ಲ ಅನ್ನೋದನ್ನು ಖಚಿತ ಪಡಿಸಿಕೊಂಡೇ ಈ ಕೃತ್ಯ ಎಸಗಿರುವ ಕುರಿತು ಪೊಲೀಸ ರು ಶಂಕೆ ವ್ಯಕ್ತಪಡಿಸಿದ್ದಾರೆ.

ಕಾಪು ವೃತ್ತ ನಿರೀಕ್ಷಕ ಪ್ರಕಾಶ್, ಕಾಪು ಎಸ್.ಐ ರಾಘವೇಂದ್ರ .ಸಿ, ಕ್ರೈಂ ಎಸ್‍ಐ ತಿಮ್ಮೇಶ್ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಇನ್ನು ಬೆರಳಚ್ಚು ಮತ್ತು ಶ್ವಾನ ದಳ ಪಡೆ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಲಾಗುತ್ತಿದೆ.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker