ಕರಾವಳಿ

ಉಡುಪಿ ನಿಯಂತ್ರಣ ತಪ್ಪಿ ಮೂರು ವಾಹನಕೆ ಡಿಕ್ಕಿ ಹೊಡೆದ ಕಾರು ಚಾಲಕ

ಉಡುಪಿ ಸೆ.1: ಉಡುಪಿ ಜಿಲ್ಲೆಯ ಮಲ್ಪೆ ರಸ್ತೆಯ ಕಲ್ಮಾಡಿ ಜಂಕ್ಷನ್ ಬಳಿ ಸರಣಿ ಅಪಘಾತ ನಡೆದಿದೆ. ಕಾರು ಉಡುಪಿ ಕಡೆಯಿಂದ ಮಲ್ಪೆಗೆ ಬರುತ್ತಿರುವ ವೇಳೆ ಕಾರು ಚಾಲಕ ನಿಯಂತ್ರಣ ತಪ್ಪಿ ಮೂರು ಬೈಕ್ ಗಳಿಗೆ ಡಿಕ್ಕಿ ಹೊಡೆದಿದ್ದಾನೆ ಎಂದು ತಿಳಿದು ಬಂದಿದೆ. ಮೂರು ಬೈಕ್ ಸವಾರರು ಗಂಭಿರ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೈಕ್ ಸವಾರ ಕಾನಂಗಿಯ ಪ್ರಶಾಂತ ಮತ್ತು ಇನ್ನೊಬ್ಬ ದಯಾನಂದ ಹಾಗೂ ಸುರೇಶ್ ಎಂದು ತಿಳಿದು ಬಂದಿದೆ. ಗಂಭೀರವಾಗಿ ಗಾಯಗೊಂಡ ವರನ್ನು ನಗರ ಸಭೆ ಸದಸ್ಯ ಸುಂದರ್ ಕಲ್ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕಾರು ಚಾಲಕ ಸುಕೇಶ್ ಕುಂದಾಪುರ ನಿವಾಸಿ ಎನ್ನಲಾಗಿದೆ. ಕಾರು ಡಿಕ್ಕಿಯಾದಾಗ ಪಕ್ಕದಲ್ಲಿ ಇದ್ದ ಮೀನಿನ ಬುಟ್ಟಿಗೆ ಕೂಡ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ. ಮಲ್ಪೆ ಪೊಲೀಸರು ಸ್ಥಳಕ್ಕೆ ಕೂಡಲೇ ಬಂದು ಪರಿಶೀಲನೆ ನಡೆಸುತ್ತಿದ್ದಾರೆ. ಸರಣಿ ಅಪಘಾತ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker